ರಮ್ಮಿ ಗೇಮ್ ಆನ್‌ಲೈನ್‌ನಲ್ಲಿ ಹೇಗೆ ಆಡುವುದು

ರಮ್ಮಿಯು ಭಾರತದಲ್ಲಿ ಭಾರೀ ಸಂಖ್ಯೆಯ ಆಟಗಾರರನ್ನು ಹೊಂದಿರುವ ಜನಪ್ರಿಯ ಕಾರ್ಡ್ ಆಟವಾಗಿದೆ. ಆದರೆ ಆರಂಭಿಕರಿಗೆ ರಮ್ಮಿ ಆಟವನ್ನು ಕಲಿತುಕೊಳ್ಳುವುದು ಯಾವಗಲೂ ಸ್ವಲ್ಪ ತಿಣುಕಾಟದ ಸಂಗತಿ ಅನ್ನಿಸಬಹುದು. ರಮ್ಮಿ ಕಾರ್ಡ್‌ ಆಟ ಆಡಬಯಸುವ ಹೊಸಬರಿಗೆ ಯಾವಾಗಲೂ ಹೀಗೇ ಆಗುತ್ತದೆ; ನಾನು ಗೆಲ್ಲುವುದಕ್ಕಾಗಿ ರಮ್ಮಿ ಆಡುವುದು ಹೇಗೆ? ಅನ್ನುವ ಪ್ರಶ್ನೆ ಕಾಡುತ್ತದೆ. ಅದೇನೇ ಇರಲಿ, ಆನ್‌ಲೈನ್‌ನಲ್ಲಿ ರಮ್ಮಿ ಆಟ ಆಡುವುದು ಹೇಗೆ ಎನ್ನುವ ಬಗ್ಗೆ ನಾವಿಲ್ಲಿ ಒಂದಿಷ್ಟು ಸರಳ ರಮ್ಮಿ ನಿಯಮಗಳನ್ನು ನೀಡುತ್ತಿದ್ದೇವೆ.

ರಮ್ಮಿ ಮೂಲತಃ ಒಂದು ಕಾರ್ಡ್‌ ಗೇಮ್ ಆಗಿದ್ದು ಆಟದ ಆರಂಭದಲ್ಲಿ ನಿಮ್ಮ ಕೈಚಲನೆಯನ್ನು ಸುಧಾರಿಸಿಕೊಳ್ಳುವುದು ನಿಮ್ಮ ಗುರಿಯಾಗಿರುತ್ತದೆ. ಇದನ್ನು ಎರಡು ವಿಧಗಳಲ್ಲಿ ಮಾಡಬಹುದು -

 • ಒಂದು ಸ್ಟಾಕ್‌ನಿಂದ (ಅಥವಾ ರಾಶಿಯಿಂದ) ಕಾರ್ಡ್ ಅನ್ನು ಎತ್ತಿಕೊಳ್ಳುವುದು
 • ನಿಮ್ಮ ವಿರೋಧಿ ಆಟಗಾರ ಎಸೆದ ಕಾರ್ಡ್ ಅನ್ನು ಎತ್ತಿಕೊಳ್ಳುತ್ತಲೇ ನಿಮ್ಮ ಕೈಯಿಂದ ಒಂದು ಕಾರ್ಡ್ ಅನ್ನು ಎಸೆಯುವುದು.


ಇದು ಬಹಳ ಸುಲಭ ಅನ್ನಿಸುತ್ತದೆ, ಅಲ್ಲವೇ? ಏಕೆಂದರೆ ಕಾರ್ಡ್‌ಗಳೊಂದಿಗೆ ರಮ್ಮಿ ಆಡುವುದು ಹೇಗೆ ಎನ್ನುವುದರ ಪ್ರಾಥಮಿಕ ಸಂಗತಿಗಳು ನಿಮಗೆ ತಿಳಿದಿದ್ದರೆ, ಆನ್‌ಲೈನ್‌ನಲ್ಲಿ ರಮ್ಮಿ ಆಟ ಆರಂಭಿಸುವುದು ಅಷ್ಟು ಸುಲಭ. ರಮ್ಮಿ ಆಟವನ್ನು ಆನ್‌ಲೈನ್‌ನಲ್ಲಿ 2 ಅಥವಾ 6 ಆಟಗಾರರೊಂದಿಗೆ (ಹೆಚ್ಚಿದ್ದಷ್ಟೂ ಆಟದ ಮಜಾ ಹೆಚ್ಚು ಅಲ್ಲವೇ?) ಆಡಬಹುದು. ಆಟಗಾರರ ಸಂಖ್ಯೆ ಮತ್ತು ಆಟದ ವಿಧ ಆಧರಿಸಿ ಬಳಸುವ ಒಟ್ಟಾರೆ ಡೆಕ್‌ಗಳ ಸಂಖ್ಯೆ 2-4ರಷ್ಟಾಗಬಹುದು. ಈಗ ಆನ್‌ಲೈನ್‌ನಲ್ಲಿ ರಮ್ಮಿ ಕಾರ್ಡ್ ಗೇಮ್ ಆಟ ಕಲಿಯುವ ಅತ್ಯಂತ ಮುಖ್ಯ ಭಾಗಕ್ಕೆ ಬನ್ನಿ - ರಮ್ಮಿ ಆಟದ ಉದ್ದೇಶ ಅಥವಾ ಗುರಿ ಏನು?

Download KhelPlay Rummy App on Your Mobile

 • Scan the QR Code Khelplay Rummy
 • Download App Khelplay Rummy Khelplay Rummy

ರಮ್ಮಿ ಆಟದ ಉದ್ದೇಶ -
ನೋಡಿ, ಎಲ್ಲ ಆಟಗಳ ಹಾಗೆ, ರಮ್ಮಿಯಲ್ಲಿ ನಿಮ್ಮ ಅಂತಿಮ ಉದ್ದೇಶ ಗೆಲ್ಲುವುದು! ಇರಲಿ, ಗಂಭೀರವಾಗಿ ಹೇಳುವುದಾದರೆ, ನಿಮ್ಮ ಕಾರ್ಡ್‌ಗಳನ್ನು ಎರಡು ಪ್ರಾಥಮಿಕ ವಿಧಗಳಲ್ಲಿ ಘೋಷಣೆ ಅಥವಾ ಮೆಲ್ಡ್ ಮಾಡುವುದು ನಿಮ್ಮ ಉದ್ದೇವಾಗಿರುತ್ತದೆ -

 • ರನ್‌ಗಳು/ಅನುಕ್ರಮ - ಅನುಕ್ರಮ ಆದೇಶದಲ್ಲಿ ಗುಂಪುಗೂಡಿಸಲಾಗಿರುವ ಒಂದೇ ಸೂಟ್‌ನ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಕಾರ್ಡ್‌ಗಳು, ಉದಾಹರಣೆಗೆ 4. 5, 6 ಅಥವಾ 8. 9, 10, J. ಇದನ್ನು "ಶುದ್ಧ ಅನುಕ್ರಮ" ಅನ್ನಲಾಗುತ್ತದೆ. ಅಶುದ್ಧ ಅನುಕ್ರಮವು ಜೋಕರ್‌ನೊಂದಿಗೆ ಇರಬಹುದು.
 • ಸೆಟ್‌ಗಳು - ಒಂದೇ ಶ್ರೇಣಿಯ ಮೂರು ಅಥವಾ ನಾಲ್ಕು, ಉದಾಹರಣೆಗೆ 7,7,7


ಆನ್‌ಲೈನ್‌ನಲ್ಲಿ ರಮ್ಮಿ ಆಡುವುದು ಹೇಗೆ ಎಂದು ಕಲಿಯಲು ನಿಮಗೆ ನೆರವಾಗುವ ನಿಯಮಗಳೊಂದಿಗೆ ನಾವು ಮುಂದುವರಿಯುವುದಕ್ಕೆ ಮುಂಚೆ, ಈ ಕೆಳಗಿನ ಪದಗಳನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎನ್ನುವುದನ್ನು ನಾವು ಖಚಿತಪಡಿಸಿಕೊಳ್ಳಬೇಕಿದೆ -

 • ಲ್ಡಿಂಗ್ - ನಿಮಗೆ ನೀಡಲಾಗಿರುವ ಕಾರ್ಡ್‌ಗಳ ಸಂಯೋಜನೆಯಿಂದ ಕಾರ್ಡ್‌ಗಳನ್ನು ಕೈಯಿಂದ ತೆಗೆದು ನಿಮ್ಮೆದುರಿಗೆ ಮೇಜಿನ ಮೇಲೆ ಮೇಲ್ಮುಖವಾಗಿ ಇರಿಸುವುದನ್ನು ಮೆಲ್ಡಿಂಗ್ ಒಳಗೊಂಡಿರುತ್ತದೆ. ಮೇಲೆ ವಿವರಿಸಿರುವಂತೆ, ಇಲ್ಲಿ ಎರಡು ಭಿನ್ನ ಸಂಯೋಜನೆಗಳಿವೆ -ರನ್ಸ್ ಮತ್ತು ಸೆಟ್ಸ್.
 • ಲೇ ಆಫ್ - ಇದು ಈಗಾಗಲೇ ಟೇಬಲ್ ಮೇಲಿದೆ ಎಂದು ಘೋಷಿಸಲು/ಮೆಲ್ಡ್ ಮಾಡಲು ನಿಮ್ಮ ಕೈಯಿಂದ ಒಂದು ಕಾರ್ಡ್ ತೆಗೆದಿರಿಸುವುದನ್ನು ಒಳಗೊಂಡಿದೆ.
 • ಡಿಸ್‌ಕಾರ್ಡ್ - ಡಿಸ್‌ಕಾರ್ಡ್‌ ರಾಶಿಯ ಮೇಲೆ ನಿಮ್ಮ ಕೈಯಿಂದ ನೀವು ಒಂದು ಕಾರ್ಡ್ ಪ್ಲೇ ಮಾಡಿದಾಗ, ಅದನ್ನು ಡಿಸ್‌ಕಾರ್ಡಿಂಗ್ ಅನ್ನಲಾಗುತ್ತದೆ. ಹೀಗೆ ಪ್ರತಿ ಸುತ್ತಿನ ಕೊನೆಯಲ್ಲಿ, ಡಿಸ್‌ಕಾರ್ಡ್ ಮಾಡುವ ಮೂಲಕ ನೀವು ಒಂದು ಕಾರ್ಡ್‌ನಿಂದ ಮುಕ್ತರಾಗುತ್ತೀರಿ.


ರಮ್ಮಿ ಆಡುವುದು ಹೇಗೆ ಎನ್ನುವುದನ್ನು ಕಲಿಯುವ ಮುಂದಿನ ಹಂತವೆಂದರೆ ರಮ್ಮಿ ಆಟದ ಕೆಲವು ಸರಳ ನಿಯಮಗಳನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದಾಗಿದೆ.

 • ಸಾಂಪ್ರದಾಯಿಕ ರಮ್ಮಿಯನ್ನು ಪ್ರತಿಯೊಂದರಲ್ಲೂ ಒಂದು ಮುದ್ರಿತ ಜೋಕರ್ ಇರುವ ಎರಡು ಡೆಕ್ ಕಾರ್ಡ್‌ಗಳ ನೆರವಿನೊಂದಿಗೆ ಆಡಬಹುದು.
 • ಎಕ್ಕ ಜೊತೆಗಿನ ಜಾಕ್‌, ಕ್ವೀನ್ ಮತ್ತು ಕಿಂಗ್‌ನಂಥ ಎಲ್ಲ ಫೇಸ್‌ ಕಾರ್ಡ್‌ಗಳು 10 ಅಂಕಗಳನ್ನು ಹೊಂದಿರುತ್ತವೆ. ಉಳಿದ ಕಾರ್ಡ್‌ಗಳು 2, 3, 4, 5, 6, 7, 8, 9 ಮತ್ತು 10 ಕಾರ್ಡ್‌ ನಂಬರ್‌ಗೆ ಸಮನಾದ ಮೌಲ್ಯಗಳನ್ನು ಹೊಂದಿರುತ್ತವೆ ಉದಾಹರಣೆಗೆ 3ರ ಸ್ಪೇಡ್ 3 ಅಂಕ ಹೊಂದಿರುತ್ತದೆ.
 • ಇತರ ಅರ್ಹ ಸೆಟ್‌ಗಳು ಮತ್ತು ಸೀಕ್ವೆನ್ಸ್‌ಗಳ ಜೊತೆ ಒಂದು ಶುದ್ಧ ಸೀಕ್ವೆನ್ಸ್ ಅಗತ್ಯವಾಗಿರುತ್ತದೆ.
 • ಶುದ್ಧ ಸೀಕ್ವೆನ್ಸ್
  ರಮ್ಮಿ ಕಾರ್ಡ್ ಆಟ ಕಲಿಯಲು ನೀವು ಆಟದಲ್ಲಿ ಕನಿಷ್ಟ 2 ಮತ್ತು ಗರಿಷ್ಠ 6 ಆಟಗಾರರನ್ನು ಹೊಂದಿರಬೇಕು. ರಮ್ಮಿ ಆಡಲು ಹಾಗೂ ಆಟವನ್ನು ಗೆಲ್ಲಲು, ಆಟಗಾರ ಒಂದೇ ಸೂಟ್‌ನಿಂದ 3 ಅಥವಾ ಹೆಚ್ಚು ಒಂದರ ನಂತರ ಒಂದು ಕಾರ್ಡ್‌ಗಳ ಅನುಕ್ರಮವನ್ನು ರಚಿಸಬೇಕು. ಈ ಅನುಕ್ರಮವನ್ನು ವೈಲ್ಡ್ ಕಾರ್ಡ್ ಅಥವಾ ಜೋಕರ್ ಇಲ್ಲದೆ ರಚಿಸಬೇಕು. ಇದನ್ನು ಶುದ್ಧ ಸೀಕ್ವೆನ್ಸ್ ಎಂದು ಕರೆಯಲಾಗುತ್ತದೆ.

  ಉದಾಹರಣೆಗೆ:

  how to play rummy in kannada
 • ಅಶುದ್ಧ ಸೀಕ್ವೆನ್ಸ್
  ಆನ್‌ಲೈನ್‌ನಲ್ಲಿ ರಮ್ಮಿ ಆಡುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳಲು ಸರಿಯಾದ ರೀತಿಯಲ್ಲಿ ರಮ್ಮಿ ಆಡುವುದನ್ನೂ ನೀವು ಕಲಿತುಕೊಳ್ಳಬೇಕು. ನೀವು ಅಶುದ್ಧ ಸೀಕ್ವೆನ್ಸ್ ಬಗ್ಗೆ ತಿಳಿದುಕೊಳ್ಳಬೇಕು. ಒಂದೇ ಸೂಟ್‌ನಿಂದ 3 ಅಥವಾ ಅದಕ್ಕಿಂತ ಹೆಚ್ಚಿನ ಒಂದರ ನಂತರ ಒಂದು ಕಾರ್ಡ್‌ಗಳೊಂದಿಗೆ ಒಂದು ಅಶುದ್ಧ ಸೀಕ್ವೆನ್ಸ್ ಮಾಡಲಾಗುತ್ತದೆ. ಅದಾಗ್ಯೂ, ಒಂದು ಸೀಕ್ವೆನ್ಸ್ ರಚಿಸಲು ಇದರಲ್ಲಿ ಒಂದು ನ್ಯಾಚುರಲ್ ಕಾರ್ಡ್‌ ಬದಲಿಗೆ ವೈಲ್ಡ್‌ ಕಾರ್ಡ್ ಅಥವಾ ಜೋಕರ್ ಬಳಸಬಹುದು. ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಕೆಳಗೆ ನೀಡಿದ ಉದಾಹರಣೆ ನಿಮಗೆ ನೆರವಾಗುತ್ತದೆ.

  ಉದಾಹರಣೆಗೆ:

  life in rummy card game
 • ಸೆಟ್ಸ್
  ಸೀಕ್ವೆನ್ಸ್ ರಚಿಸುವುದು ಹೇಗೆ ಎಂದು ಅರ್ಥ ಮಾಡಿಕೊಂಡ ನಂತರ ಈಗ ನಾವು ಸೆಟ್ ಎಂದರೆ ಏನು ಎಂದು ತಿಳಿದುಕೊಳ್ಳಬೇಕು. ಸೆಟ್ ಅಂರೆ ಒಂದೇ ಶ್ರೇಣಿಯ ಆದರೆ ಭಿನ್ನ ಸೂಟ್‌ಗಳಿಗೆ ಸೇರಿರುವ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಕಾರ್ಡ್‌ಗಳ ಗುಂಪು. ನಿಮ್ಮ ಸೆಟ್ ಪೂರ್ಣಗೊಳಿಸಲು ನೀವು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಜೋಕರ್ ಕಾರ್ಡ ಬಳಸಬಹುದು. ಈ ಸೆಟ್‌ಗಳನ್ನು ಗುಂಪುಗಳನ್ನು ಸೂಕ್ತವಾಗಿ ಜೋಡಿಸಲು ಒಮ್ಮೆ ನೀವು ಯಶಸ್ವಿಯಾದ ಬಳಿಕ, ನೀವು ನಿಮ್ಮ ಕಾರ್ಡ್ ಡಿಕ್ಲೇರ ಮಾಡಿ ಆಟ ಗೆಲ್ಲಬಹುದು. ಸೆಟ್‌ನ ಒಂದು ಉದಾಹರಣೆ ಇಲ್ಲಿದೆ.

  ಉದಾಹರಣೆಗೆ:

  life in rummy game
 • ಒಂದು ಅರ್ಹ ಶೋ ಮಾಡುವುದು

  ಖೇಲ್‌ಪ್ಲೇ ರಮ್ಮಿ ಟೇಬಲ್‌ನಲ್ಲಿ, ಶೋ ಮಾಡಲು, ಆಟಗಾರರು ಒಂದು ಕಾರ್ಡ್ ಆಯ್ಕೆ ಮಾಡಿಕೊಂಡ ಫಿನಿಶ್ ಟ್ಯಾಬ್ ಒತ್ತಬೇಕು. ಅವರು ಕಾರ್ಡ್ ಎಳೆದು ಅದನ್ನು ಶೋ ಮೇಲೆ ಡ್ರಾಪ್ ಕೂಡ ಮಾಡಬಹುದು.

  ಉದಾಹರಣೆಗೆ 13 ಕಾರ್ಡ್‌ಗಳ ರಮ್ಮಿಯಲ್ಲಿ, ಒಂದು ವೇಳೆ ಆಟಗಾರ ತಪ್ಪಾದ ಶೋ ಮಾಡಿದರೆ, ಅಂದರೆ ಅವನ ಸೀಕ್ವೆನ್ಸ್‌ಗಳು ಮತ್ತು ಸೆಟ್‌ಗಳು ಅರ್ಹವಾಗಿಲ್ಲದಿದ್ದರೆ, ಆಗ ತಪ್ಪಾದ ಮೂವ್‌ಗಾಗಿ ಆತ 80 ಅಂಕಗಳ ಪೆನಾಲ್ಟಿ ಪಡೆಯುತ್ತಾನೆ. ಆಟಗಾರ ಶೋ ಡಿಕ್ಲೇರ್ ಮಾಡಿದ ನಂತರ, ಟೇಬಲ್‌ನಲ್ಲಿರುವ ಎಲ್ಲ ಆಟಗಾರರು ತಮ್ಮ ಕಾರ್ಡ್‌ಗಳನ್ನು ತೋರಿಸಬೇಕು.

  10 ಕಾರ್ಡ್ ರಮ್ಮಿಯಲ್ಲಿ ಅರ್ಹ ಶೋ ಮಾಡುವುದು ಹೇಗೆ?
  21 ಕಾರ್ಡ್ ರಮ್ಮಿಯಲ್ಲಿ ಅರ್ಹ ಶೋ ಮಾಡುವುದು ಹೇಗೆ?
  27 ಕಾರ್ಡ್ ರಮ್ಮಿಯಲ್ಲಿ ಅರ್ಹ ಶೋ ಮಾಡುವುದು ಹೇಗೆ?
 • ಆಟವನ್ನು ಗೆಲ್ಲುವುದು:

  ಸೀಕ್ವೆನ್ಸ್‌ಗಳು ಮತ್ತು ಸೆಟ್‌ಗಳ ರೂಪದಲ್ಲಿ ಎಲ್ಲ ಕಾರ್ಡ್‌ಗಳನ್ನು ಜೋಡಿಸಿದ ನಂತರ, ಆಟಗಾರ ತಾನು ಆಟದ ವಿಜೇತ ಎಂದು ಘೋಷಿಸುವ ಸಲುವಾಗಿ ಶೋ ಮಾಡಬೇಕಾಗುತ್ತದೆ. ಅದಾಗ್ಯೂ, ಆಟ ನಡೆಯುವಾಗ ಯಾವುದೇ ಸಮಯದಲ್ಲಿ ಆತ ಶೋ ಕೇಳುವಂತಿಲ್ಲ; ಆತ ಶೋ ಮಾಡಲು ತನ್ನ ಸರದಿಗಾಗಿ ಕಾಯಬೇಕಾಗುತ್ತದೆ. ತನ್ನ ಸರದಿ ಬಂದಾಗ ಆತ ಶೋ ಮಾಡಬಹುದು, ಒಂದು ವೇಳೆ ಮೇಲೆ ವಿವರಿಸಿರುವಂತೆ ಕಾರ್ಡ್‌ಗಳನ್ನು ಅರ್ಹ ಸೆಟ್‌ಗಳು ಮತ್ತು ಸೀಕ್ವೆನ್ಸ್‌ಗಳಲ್ಲಿ ಗುಂಪುಗೂಡಿಸಿದ್ದರೆ ಆಗ ಆಟಗಾರ ಆಟವನ್ನು ಗೆಲ್ಲುತ್ತಾನೆ.
ಕೆಳಗಿನ ಕೋಷ್ಟಕದಲ್ಲಿ ನಮೂದಿಸಲಾಗಿರುವ ಡ್ರಾಪ್‌ ಪಾಯಿಂಟ್‌ಗಳು ಕೇವಲ 13 ಕಾರ್ಡ್‌ ರಮ್ಮಿಗೆ ಸೀಮಿತವಾಗಿವೆ.

ಡ್ರಾಪ್ ಪಾಯಿಂಟ್ಸ್ 101 ಪೂಲ್ ರಮ್ಮಿ 201 ಪೂಲ್ ರಮ್ಮಿ
ಮೊದಲ ಡ್ರಾಪ್ (ಕಾರ್ಡ್ ತೆಗೆಯುವ ಮೊದಲು) 20 25
ಮಧ್ಯದ ಡ್ರಾಪ್ (ಒಂದು ವೇಳೆ ಒಬ್ಬ ಆಟಗಾರ ಕಾರ್ಡ್ ತೆಗೆದಿದ್ದರೆ) 40 50
10 ಕಾರ್ಡ್ ರಮ್ಮಿಗೆ ಡ್ರಾಪ್ ಪಾಯಿಂಟ್‌ಗಳು
21 ಕಾರ್ಡ್ ರಮ್ಮಿಗೆ ಡ್ರಾಪ್ ಪಾಯಿಂಟ್‌ಗಳು
27 ಕಾರ್ಡ್ ರಮ್ಮಿಗೆ ಡ್ರಾಪ್ ಪಾಯಿಂಟ್‌ಗಳು

ಆಟಗಾರ ಆಟ ಸೋತಾಗ ಪಾಯಿಂಟ್‌ಗಳ ಲೆಕ್ಕಾಚಾರ

ಸೋತ ಆಟಗಾರನ ಪಾಯಿಂಟ್‌ಗಳನ್ನು ಅರ್ಹ ಸೆಟ್/ ಸೀಕ್ವೆನ್ಸ್ ಭಾಗವಲ್ಲದ ಅವರ ಎಲ್ಲ ಕಾರ್ಡ್‌ಗಳ ಮೌಲ್ಯವನ್ನು ಒಟ್ಟುಗೂಡಿಸಿ ಲೆಕ್ಕ ಮಾಡಲಾಗುತ್ತದೆ. ಅದಾಗ್ಯೂ, ಇದಕ್ಕೆ ಕೆಲವು ವಿನಾಯಿತಿಗಳೂ ಇವೆ. ಅವುಗಳನ್ನು ಕೆಳಗೆ ನೀಡಲಾಗಿದೆ.:
 • ಒಂದು ವೇಳೆ ಸೋಲುವ ಆಟಗಾರ ಯಾವುದೇ ಶುದ್ಧ ಸೀಕ್ವೆನ್ಸ್ ಹೊಂದಿಲ್ಲದಿದ್ದರೆ, ಅವರ ಎಲ್ಲ ಕಾರ್ಡ್‌ಗಳ ಪಾಯಿಂಟ್‌ಗಳನ್ನು ಕೂಡಿಸಲಾಗುತ್ತದೆ.
 • ಒಂದು ವೇಳೆ ಸೋಲುವ ಆಟಗಾರನಿಗೆ ಎರಡು ಸೀಕ್ವೆನ್ಸ್‌ಗಳನ್ನು ರಚಿಸಲು ಸಾಧ್ಯವಾಗದಿದ್ದರೆ ಮತ್ತು ಕೇವಲ ಒಂದು ಶುದ್ಧ ಸೀಕ್ವೆನ್ಸ್ ಹೊಂದಿದ್ದರೆ ಆಗ ಮಾತ್ರ ಶುದ್ಧ ಸೀಕ್ವೆನ್ಸ್‌ನ ಅಂಕಗಳನ್ನು ಕೂಡಿಸಲಾಗುವುದಿಲ್ಲ.
 • ನಿರ್ದಿಷ್ಟವಾಗಿ 13 ಕಾರ್ಡ್ ರಮ್ಮಿಯಲ್ಲಿ, ಒಬ್ಬ ಆಟಗಾರ 80ಕ್ಕಿಂತ ಹೆಚ್ಚಿನ ಪಾಯಿಂಟ್ಸ್ ಪಡೆಯಲು ಸಾಧ್ಯವಿಲ್ಲ. ಉದಾಹರಣೆಗೆ, ಸೋಲುವ ಆಟಗಾರನ ಕಾರ್ಡ್‌ಗಳ ಒಟ್ಟು ಪಾಯಿಂಟ್‌ಗಳು 90 ಆಗಿದ್ದರೆ ಆಗಲೂ ಕೂಡ ಅವನು 80 ಪಾಯಿಂಟ್‌ಗಳನ್ನಷ್ಟೇ ಪಡೆಯುತ್ತಾನೆ.
 • ಒಂದು ವೇಳೆ ಆಟಗಾರ ಎಲ್ಲ ಅಗತ್ಯ ಸೀಕ್ವೆನ್ಸ್‌ಗಳು/ ಸೆಟ್‌ಗಳನ್ನು ಮಾಡಿದ್ದರೆ ಮತ್ತು ಅರ್ಹ ಶೋ ಮಾಡಿದ್ದರೆ ಆದರೆ ಆಟ ಡಿಕ್ಲೇರ್ ಮಾಡಿದವನು ಅವನಲ್ಲದಿದ್ದರೆ, ಆಗ ಅವನಿಗೆ 2 ಪಾಯಿಂಟ್‌ಗಳು ಸಿಗುತ್ತವೆ.

ಈಗ ನೀವು ಆನ್‌ಲೈನ್‌ನಲ್ಲಿ ರಮ್ಮಿ ಆಡುವುದು ಹೇಗೆ ಎನ್ನುವುದನ್ನು ತಿಳಿದುಕೊಂಡಿರುವುದರಿಂದ, ಎಂಜಾಯ್ ಮಾಡಿ!

Scroll To Top